ಅಲ್‍ಡಾನಾ, ಫ್ರಾನ್‍ಸಿಸ್ ಕೋಡೆ (1537-1578). ಹದಿನಾರನೆಯ ಶತಮಾನದ ಸ್ಪೇನ್‍ದೇಶದ ಕವಿ. ದೊರೆ ಸೆಬಾಸ್ಟಿಯನ್ ಮೊರ್ಯಾಕೊನ ಮೇಲೆ ನಡೆಸಿದ ದುರದೃಷ್ಟಕರ ದಂಡಯಾತ್ರೆಯಲ್ಲಿ ಸೈನಿಕನಾಗಿ ಭಾಗವಹಿಸಿ ಯುದ್ಧದಲ್ಲಿ ಮಡಿದ. ಧಾರ್ಮಿಕ ಹಾಗೂ ಸೈನಿಕ ಜೀವನಕ್ಕೆ ಸಂಬಂಧಿಸಿದ ವಸ್ತುಗಳನ್ನು ಕುರಿತು ಬರೆದನಲ್ಲದೆ, ಹಲವು ಪ್ರಣಯಗೀತೆಗಳನ್ನು ರಚಿಸಿದ. ಕೃತಿಗಳನ್ನು ಈತ ಸತ್ತ ಹತ್ತು ಹನ್ನೆರಡು ವರ್ಷಗಳ ಅನಂತರ ಪ್ರಕಟಿಸಲಾಯಿತು. ತ್ರಿಪದಿ ಕಾವ್ಯಶೈಲಿಯಲ್ಲಿ ಈತ ಸ್ಪೇನಿನ ಮತ್ತೊಬ್ಬ ಪ್ರತಿಭಾವಂತ ಕವಿ ಅರಿಯಸ್ ಮೊಂಟಾನೋಗೆ ಬರೆದ ಪತ್ರಗಳು ಸತ್ತ್ವಯುತವಾಗಿವೆ.
(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ